ಜಿಲ್ಲೆಯಾದ್ಯಂತ ಮುಂದುವರೆದ ಮಳೆ ಅಬ್ಬರ

ಜಿಲ್ಲೆಯಾದ್ಯಂತ ಮುಂದುವರೆದ ಮಳೆ ಅಬ್ಬರ

ಜಿಲ್ಲೆಯಾದ್ಯಂತ ಮುಂದುವರೆದ ಮಳೆ ಅಬ್ಬರ - Janathavaniಮಲೇಬೆನ್ನೂರು, ಜು.25-  ಜಿಲ್ಲಾದ್ಯಂತ ವರುಣನ ಆರ್ಭಟ ಮಂಗಳವಾರವೂ ಮುಂದುವರೆದಿದೆ.  ದಿನ ಪೂರ್ತಿ ಸುರಿಯುತ್ತಿರುವ ಮಳೆಯು ರಾಜ್ಯದ ನಡುನಾಡು ದಾವಣಗೆರೆಯಲ್ಲಿ ಮಲೆನಾಡಿನ ಅನುಭವ ಉಂಟು ಮಾಡಿದೆ.

ಸೋಮವಾರ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತಾದ್ದರಿಂದ ಮಕ್ಕಳು ತುಸು ನಿರಾಳರಾಗಿದ್ದರು. ಆದರೆ ಮಂಗಳವಾರ ಬಿಡದ ಮಳೆಯ ನಡುವೆಯೂ ಶಾಲೆಗಳಿಗೆ ಹೋಗಬೇಕಾಗಿತ್ತು. ಇನ್ನು ಕಚೇರಿ ಕಾರ್ಯಗಳಿಗೆ ಹೋಗಬೇಕಾದವರಿಗೆ ರೇನ್ ಕೋಟ್ ಹಾಗೂ ಛತ್ರಿ ಬಳಕೆ ಅನಿವಾರ್ಯವಾಗಿತ್ತು. ಬಿಡುವಿಲ್ಲದ ಮಳೆಯಿಂದಾಗಿ ನಗರದಲ್ಲಿ ವ್ಯಾಪಾರ, ವಹಿವಾಟು ಮಂದಗತಿಯಲ್ಲಿತ್ತು. 

ಗೋಡೆ ಕುಸಿದು ಮಗು ಸಾವು: ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಒಂದೂವರೆ ವರ್ಷದ  ಹೆಣ್ಣು ಮಗು ಸಾವನ್ನಪ್ಪಿರುವ  ಹೃದಯ ವಿದ್ರಾವಕ ಘಟನೆ ಸೋಮವಾರ ತಡರಾತ್ರಿ ಕುಂಬಳೂರಿನಲ್ಲಿ ನಡೆದಿದೆ

ಗ್ರಾಮದ ರಾಮಜ್ಜರ ರಾಮಚಂದ್ರಪ್ಪನವರ ಮೊಮ್ಮಗಳು ಹಾಗೂ ಕೆಂಚಪ್ಪ ಮತ್ತು ಲಕ್ಷ್ಮಿದೇವಿ ಅವರ ಪುತ್ರಿ ಸ್ಪೂರ್ತಿ (16 ತಿಂಗಳು) ಮೃತಪಟ್ಟ ಮಗು. 

ಘಟನೆಯಲ್ಲಿ ಮಗುವಿನ ತಂದೆ ಕೆಂಚಪ್ಪ ಅವರ ಕಾಲಿಗೆ ತೀವ್ರ ಪೆಟ್ಟಾಗಿದೆ. ತಾಯಿ ಲಕ್ಷ್ಮಿದೇವಿಗೂ ಗಾಯಗಳಾಗಿದ್ದು ತಮ್ಮ ಕಣ್ಮುಂದೆಯೇ ಮಗಳು ಸಾವನ್ನಪ್ಪಿರುವ ಆಘಾತದಲ್ಲಿದ್ದಾರೆ. ಹೆತ್ತವರು ಹಾಗೂ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೆಂಚಪ್ಪನವರ ತುಂಬು ಕುಟುಂಬ ಹಳೆಯ ಹಂಚಿನ ಸಣ್ಣ ಮನೆಯಲ್ಲಿ ವಾಸಿಸುತ್ತಿತ್ತು.

ಘಟನೆ ವಿವರ : ಸೋಮವಾರ ರಾತ್ರಿ ಎಂದಿನಂತೆ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಕೆಂಚಪ್ಪ, ಲಕ್ಷ್ಮಿದೇವಿ ಅವರು ಪುತ್ರಿ ಸ್ಪೂರ್ತಿಯೊಂದಿಗೆ ಪ್ರತ್ಯೇಕವಾಗಿ ಮಲಗಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಗೋಡೆ ಕುಸಿದಿದೆ. ತಕ್ಷಣ ಸಮೀಪದಲ್ಲೇ ಮಲಗಿದ್ದ ಕುಟುಂಬದವರು ಎದ್ದು ಬಂದು ಕೆಂಚಪ್ಪ, ಲಕ್ಷ್ಮಿದೇವಿ ಮತ್ತು ಸ್ಪೂರ್ತಿ ಮೇಲೆ ಬಿದ್ದಿದ್ದ ಗೋಡೆ ಇಟ್ಟಿಗೆ-ಮಣ್ಣು ತೆರವು ಮಾಡಿ ಹೊರಗೆ ತೆಗೆಯುವಷ್ಟರಲ್ಲಿ ಸ್ಪೂರ್ತಿ ಮೃತಪಟ್ಟಿದ್ದಳು ಎನ್ನಲಾಗಿದೆ.

ಆದರೂ ಸಮೀಪದ ಮಲೇ ಬೆನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಪೂರ್ತಿ ಜೊತೆಗೆ ತಂದೆ-ತಾಯಿಯನ್ನು ಕರೆದುಕೊಂಡು ಹೋ ದಾಗ ವೈದ್ಯರು ಸ್ಪೂರ್ತಿಯನ್ನು ಪರೀಕ್ಷೆ ಮಾಡಿ ಮೃತಪಟ್ಟಿರುವುದನ್ನು ಖಚಿತಪಡಿಸಿದರು.

ವಿಷಯ ತಿಳಿದ ತಕ್ಷಣ ಮಧ್ಯರಾತ್ರಿಯೇ ತಹಶೀಲ್ದಾರ್‌ ಪೃಥ್ವಿ ಸಾನಿಕಂ, ಕಂದಾಯ ನಿರೀಕ್ಷಕ ಸಮೀರ್‌, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್‌ ಅವರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಬೆಳಿಗ್ಗೆ ವಿಷಯ ಗೊತ್ತಾಗುತ್ತಿದ್ದಂ ತೆಯೇ ಮೃತ ಮಗುವಿನ ಮನೆಯ ಬಳಿ ಗ್ರಾಮಸ್ಥರು ಹಾಗೂ ಬಂಧು-ಮಿತ್ರರು ಆಗಮಿಸಿ ಗೋಡೆ ಬಿದ್ದಿರುವುದನ್ನು ಹಾಗೂ ಮಗುವನ್ನು ನೋಡಿ ಕಂಬನಿ ಮಿಡಿದರು.

ಶಾಸಕ ಬಿ.ಪಿ. ಹರೀಶ್‌ ಅವರು ಸ್ಥಳಕ್ಕೆ ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿ, ಪ್ರಕೃತಿ ವಿಕೋಪದಡಿ 5 ಲಕ್ಷ ರೂ. ಪರಿಹಾರದ ಹಣ ಮೃತ ಮಗುವಿನ ಪೋಷಕರ ಬ್ಯಾಂಕ್‌ ಖಾತೆಗೆ ಜಮೆ ಮಾಡಿಸಿರುವುದನ್ನು ತೋರಿಸಿ, ಆಶ್ರಯ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು.

ಕಾಂಗ್ರೆಸ್‌ ಮುಖಂಡ ನಂದಿಗಾವಿ ಶ್ರೀನಿವಾಸ್‌, ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌ ಅವರು ಪ್ರತ್ಯೇಕವಾಗಿ ಸ್ಥಳಕ್ಕೆ ಆಗಮಿಸಿ ಮೃತ ಮಗುವಿನ ಕುಟುಂಬದವರಿಗೆ ಧೈರ್ಯ ಹೇಳಿ ವೈಯಕ್ತಿಕ ನೆರವು ನೀಡಿದರು. ಸಂಜೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರೂ ಆಗಮಿಸಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ, ಮಗುವಿನ ತಂದೆ-ತಾಯಿಗೆ ಸಾಂತ್ವನ ಹೇಳಿ, ಬೆಳಿಗ್ಗೆಯೇ ನಿಮ್ಮ ಖಾತೆಗೆ ಪರಿಹಾರದ 5 ಲಕ್ಷ ರೂ. ಜಮಾ ಮಾಡಿರುವುದನ್ನು ಹೇಳಿ ಸರ್ಕಾರದಿಂದ ಮನೆ ಮಂಜೂರು ಮಾಡಿಸುವುದಾಗಿ ತಿಳಿಸಿದರು.

ಈ ವೇಳೆ ಮುಖಂಡ ನಂದಿಗಾವಿ ಶ್ರೀನಿವಾಸ್‌, ಗ್ರಾ.ಪಂ. ಅಧ್ಯಕ್ಷೆ ಲೀಲಾ ಶಿವಕುಮಾರ್‌, ತಾ.ಪಂ. ಮಾಜಿ ಅಧ್ಯಕ್ಷ ಮಾಗಾನಹಳ್ಳಿ ಹಾಲಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್‌.ಹೆಚ್‌. ಬಸವರಾಜ್‌, ಕರಡಿ ರಾಜಪ್ಪ, ಎಂ. ವಾಸು, ತಹಶೀಲ್ದಾರ್‌ ಪೃಥ್ವಿ ಸಾನಿಕಂ, ಉಪತಹಶೀಲ್ದಾರ್‌ ಆರ್‌. ರವಿ, ಆರ್.ಐ. ಸಮೀರ್‌ ಬಿ.ಎ. ಶ್ರೀಧರ್‌, ಪಿಡಿಓ ಮೂರ್ತಿ ಮತ್ತಿತರರು ಹಾಜರಿದ್ದರು.

ಆರೋಪ : ಗ್ರಾ.ಪಂ. ಉಪಾಧ್ಯಕ್ಷ ಎ.ಕೆ. ಹನುಮಂತಪ್ಪ ಅವರು ಇಂತಹ ಘಟನೆಗಳು ನಡೆಯಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ. ಏಕೆಂದರೆ 3 ವರ್ಷದಲ್ಲಿ ಒಂದೂ ಆಶ್ರಯ ಮನೆ ನೀಡಿಲ್ಲ. ಸರ್ಕಾರ ಮನೆ ನೀಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ದೂರಿದರು.

error: Content is protected !!