‘ಸ್ಪಷ್ಟ ಓದು, ಶುದ್ಧ ಬರಹ’ ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕ

‘ಸ್ಪಷ್ಟ ಓದು, ಶುದ್ಧ ಬರಹ’ ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕ

ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣ ಕಿವಿಮಾತು

ದಾವಣಗೆರೆ, ಜು. 24 – ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆಸುತ್ತಿರುವ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ‘ಅಕ್ಷರಭ್ಯಾಸ ಸಂಭ್ರಮ’ವನ್ನು ನಿನ್ನೆ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮೂಲದಾರ ತಾಯಿ, ಆ ತಾಯಿ ಇವತ್ತು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿ, ಮಗು ಶಾಲೆಯಲ್ಲಿ ಮನೆಯ ವಾತಾವರಣವನ್ನು ಗುರುತಿಸುತ್ತದೆ ಹಾಗೆ ಮಕ್ಕಳಿಗ ಅಪೌಷ್ಠಿಕ ಆಹಾರವನ್ನು ಕೊಡದೇ ಪೌಷ್ಠಿಕಾಂಶದಿಂದ ಕೂಡಿರುವ ಶುದ್ಧ ಆಹಾರವನ್ನು ಕೊಡಬೇಕೆಂದು ಎಲ್ಲಾ ಪೋಷಕ ವೃಂದದವರಿಗೆ ಆಶೀರ್ವದಿಸಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ  ಅಂಬಣ್ಣ ಮಾತನಾಡಿ, ‘ಸ್ಪಷ್ಟ ಓದು, ಶುದ್ಧ ಬರಹ’ ಎಂಬ ನಾಣ್ಣುಡಿಯನ್ನು ಹೇಳುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ತಾಯಂದಿರು ತಮ್ಮ ಎಲ್ಲಾ ಆಸೆಗಳನ್ನು ಬದಿಗೊತ್ತಿ ತ್ಯಾಗಮಯಿ ಜೀವನ ನಡೆಸುತ್ತಾ, ತಮ್ಮ ಮಕ್ಕಳ ಲಾಲನೆ ಪೋಷಣೆಯಲ್ಲಿ ತಮ್ಮ ಜೀವನವನ್ನು ಸವೆಸುತ್ತಾ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡುವ ಆಕಾಂಕ್ಷೆಯನ್ನು ಹೊಂದಿರುತ್ತಾಳೆ ಎಂದು ನುಡಿದರು.

ಮತ್ತೋರ್ವ ಅತಿಥಿಯಾಗಿ ಪಾಲ್ಗೊಂಡಿದ್ದ ಆವರಗೆರೆ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ, ಪ್ರಗತಿಪರ ರೈತರೂ ಆದ ಜಿ.ಎಸ್. ಪರಮೇಶ್ವರಪ್ಪ ಮಾತನಾಡಿ, ಏಕಲವ್ಯನಲ್ಲಿ ಕಂಡಂತಹ ಗುರುಭಕ್ತಿಯನ್ನು ಹಾಗೂ ದಾನ ಶ್ರೇಷ್ಠನಾದ ಕರ್ಣನ ತ್ಯಾಗಮಯ ಜೀವನವನ್ನು ಉದಾಹರಣೆಗಳಾಗಿ ಹೇಳುತ್ತಾ, ವಿದ್ಯಾರ್ಥಿಗಳು ತಮ್ಮ ಜೀವನವನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂಭ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಛಾಯಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಎ.ಹೆಚ್. ಸುಗ್ಗಲದೇವಿಯ ವಹಿಸಿದ್ದರು.

ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕಿ ಕುಮಾರಿ ಶ್ರೀದೇವಿ ಹೆಚ್.ಟಿ. ಮಾಡಿದರು. ಸ್ವಾಗತವನ್ನು ಶಿಕ್ಷಕಿ ಕು|| ದೀಪಾ ಜಿ.ಆರ್. ಹಾಗೂ ವಂದನಾರ್ಪಣೆಯನ್ನು ಶಿಕ್ಷಕಿ ಕು|| ಅನಿತ ಡಿ. ನೆರವೇರಿಸಿದರು.

error: Content is protected !!