ಹರಿಹರ ನಗರಸಭಾಧ್ಯಕ್ಷರಾಗಿ ನಿಂಬಕ್ಕ, ಸಿದ್ದೇಶ್ ಉಪಾಧ್ಯಕ್ಷ

ಹರಿಹರ ನಗರಸಭಾಧ್ಯಕ್ಷರಾಗಿ ನಿಂಬಕ್ಕ, ಸಿದ್ದೇಶ್ ಉಪಾಧ್ಯಕ್ಷ

ಹರಿಹರ, ಜು. 10 – ಇಲ್ಲಿನ ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ನಿಂಬಕ್ಕ ಚಂದಪೂರ್ ಮತ್ತು ಉಪಾಧ್ಯಕ್ಷರಾಗಿ ಕೆ.ಜಿ. ಸಿದ್ದೇಶ್ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣೆ ಅಧಿ ಕಾರಿಯೂ ಆಗಿರುವ ಉಪವಿಭಾಗ ಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ ಘೋಷಿಸಿದ್ದಾರೆ.

ನಗರಸಭೆಯ 31 ಸದಸ್ಯರು, ಒಬ್ಬರು ಶಾಸಕ ಹಾಗೂ ಸಂಸದ ಮತದಾರರು ಸೇರಿದಂತೆ ಒಟ್ಟು 33 ಸದಸ್ಯರು ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಹೀನಾಬಾನು ದಾದಾಪೀರ್ ಮತ್ತು ಎ. ವಾಮನಮೂರ್ತಿ ಅವರು ರಾಜೀನಾಮೆ ನೀಡಿದ್ದರಿಂದ ಈ ಹುದ್ದೆಗಳು ತೆರವಾಗಿದ್ದವು. 9ನೇ ವಾರ್ಡಿನ ಸದಸ್ಯರಾದ ನಿಂಬಕ್ಕ ಹಾಗೂ 8ನೇ ವಾರ್ಡಿನ ಸದಸ್ಯ ಸಿದ್ದೇಶ್ ಅವರು ಮಾತ್ರ ನಾಮಪತ್ರಗಳನ್ನು ಸಲ್ಲಿಸಿದರು. ನಂತರ ಉಪವಿಭಾಗಧಿಕಾರಿ ದುರ್ಗಾಶ್ರೀ ಅವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ನಗರಸಭೆಯಲ್ಲಿ 15 ಜೆಡಿಎಸ್, 10 ಕಾಂಗ್ರೆಸ್, ನಾಲ್ವರು ಬಿಜೆಪಿ ಹಾಗೂ ಇಬ್ಬರು ಪಕ್ಷೇತರೂ ಸೇರಿ 31 ಸದಸ್ಯರಿದ್ದಾರೆ. ಸ್ಪಷ್ಟ ಬಹುಮತವಿಲ್ಲದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರ ಹಂಚಿಕೆ ಮಾಡಿಕೊಂಡಿವೆ.

ಈ ಬಾರಿ ಅಧ್ಯಕ್ಷ, ಉಪಾಧ್ಯಕ್ಷರ ಪದವಿಯ ಅವಧಿ ಕೂಡ ಅಕ್ಟೋಬರ್ ‌28 ರವರಿಗೆ ಮಾತ್ರ ಇರುತ್ತದೆ. ನಂತರ ಸರ್ಕಾರದ ಹೊಸದಾದ ಆದೇಶದ ಅನ್ವಯದಂತೆ ಅಧಿಕಾರ ಬದಲಾಗಲಿದೆ.

ಈ ಸಂದರ್ಭದಲ್ಲಿ ಪೌರಾಯುಕ್ತ ಐಗೂರು ಬಸವರಾಜ್, ನಗರಸಭೆ ಸದಸ್ಯರಾದ ಎ. ವಾಮನ ಮೂರ್ತಿ, ಗುತ್ತೂರು ಜಂಬಣ್ಣ, ರತ್ನ ಡಿ. ಉಜ್ಜೇಶ್, ಪಕ್ಕೀರಮ್ಮ, ಉಷಾ ಅಂಗಡಿ ಮಂಜುನಾಥ್, ದಿನೇಶ್ ಬಾಬು, ಪಿ.ಎನ್. ವಿರುಪಾಕ್ಷಪ್ಪ, ಶಂಕರ್ ಖಟಾವ್ಕರ್, ಆರ್.ಸಿ. ಜಾವೇದ್, ಎಂ. ಎಸ್. ಬಾಬುಲಾಲ್, ಎಸ್.ಎಂ. ವಸಂತ್, ಅಬ್ದುಲ್ ಅಲಿಂ, ವಿಜಯಕುಮಾರ್, ಅಶ್ವಿನಿ ಕೃಷ್ಣ, ಹನುಮಂತಪ್ಪ ಸುಮಿತ್ರಮ್ಮ, ನಾಗರತ್ನ, ಲಕ್ಷ್ಮಿ ಮೋಹನ್, ಷಾಯಿನಾಭಾನು, ಶಾಹೀನಾಬಾನು ದಾದಾಪೀರ್, ಅಲ್ತಾಫ್, ಖಲಂದರ್, ಮುಜಾ ಮಿಲ್‌ ಬಿಲ್, ಮುಖಂಡರಾದ ಪೂಜಾರ್ ಈರಣ್ಣ, ಜಾಕೀರ್, ಮನಸೂರ್, ಅಡಕಿ ಕುಮಾರ್, ಚೂರಿ ಜಗದೀಶ್, ಬೆಣ್ಣೆ ರೇವಣಸಿದ್ದಪ್ಪ, ಬಸವರಾಜ್, ಕೆ.ಜಿ. ರಾಜು, ನಾಗರಾಜ್ ಗೌಡ ಮತ್ತಿತರರಿದ್ದರು.

error: Content is protected !!