ದಾವಣಗೆರೆ, ಜು. 6- ರಾಜ್ಯ ವಿಧಾನಸಭೆಗೆ ಆರನೇ ಬಾರಿಗೆ ಆಯ್ಕೆಗೊಂಡಿರುವ ಹಾಗೂ 93ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಾಪೂಜಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಬ್ಯಾಂಕಿನ ವತಿಯಿಂದ ನಿರ್ದೇಶಕ ಮಂಡಳಿ ಸಭೆಯ ಸಂದರ್ಭದಲ್ಲಿ ಅಭಿನಂದನಾಪೂರ್ವಕವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಬ್ಯಾಂಕಿನ ನಿರ್ದೇಶಕರುಗಳಾದ ಡಾ.ಎ.ಎಸ್. ವೀರಣ್ಣ, ಡಾ. ಎಂ.ಜಿ.ಈಶ್ವರಪ್ಪ, ಡಾ.ಎ.ಅರುಣ ಕುಮಾರ್, ಡಾ. ಪಿ. ಶಶಿಕಲಾ ಕೃಷ್ಣಮೂರ್ತಿ, ಡಾ. ಷಂಷದ್ ಬೇಗಂ, ಡಾ. ಬಿ. ಪೂರ್ಣಿಮಾ, ಡಾ. ಎಚ್. ಶಿವಪ್ಪ, ಡಾ. ಕೆ.ಹನುಮಂತಪ್ಪ, ಡಾ. ಸಿ.ವೈ. ಸುದರ್ಶನ್, ಕೆ. ಬೊಮ್ಮಣ್ಣ, ಡಾ. ಎಂ.ಎಂ. ಲಿಂಗರಾಜು, ಡಾ. ಜಿ.ಎಸ್. ಯತೀಶ್, ಡಾ. ಜಿ.ವೈ. ವಿಶ್ವನಾಥ್, ಪ್ರಧಾನ ವ್ಯವಸ್ಥಾಪಕ ಎಂ. ಬಸವರಾಜ, ಸಲಹೆಗಾರರುಗಳಾದ ಡಿ.ವಿ. ರವೀಂದ್ರ, ಎಸ್. ಕಲ್ಲಪ್ಪ, ಜಿ.ವಿ. ಶಿವಶಂಕರ್, ವ್ಯವಸ್ಥಾಪಕರುಗಳಾದ ಬಿ.ಜಿ. ಬಸವರಾಜಪ್ಪ, ಶೋಭಾ ಪಾಟೀಲ್, ಕಲಾ ಡಿ.ಹೆಚ್., ಜಗದೀಶ್ ಹೆಚ್.ಜಿ., ಪ್ರಸನ್ನ ಎಂ.ಎಸ್. ಹಾಗೂ ಡಿ.ಜಿ. ರವಿಶಂಕರ್, ಟಿ. ರೇವಣಪ್ಪ, ಮಧುಕೇಶ್ವರ ಪಾಟೀಲ್, ಜಿ.ಎಸ್. ಲೋಕೇಶ್ವರಪ್ಪ, ಡಿ. ನವೀನ್, ಕೆ.ಎನ್. ತಿರುಪಾಲಪ್ಪ, ಸಿ. ಕುಬೇರ, ಎ. ಭೀಮಾಶಂಕರ್ ಮುಂತಾದವರು ಇದ್ದರು.