ತಂದೆ ಶಿವಶಂಕರಪ್ಪ ಅವರನ್ನು ಗೆಲ್ಲಿಸಿದ ದಕ್ಷಿಣ ಕ್ಷೇತ್ರದ ಜನತೆಯ ಋಣ ತೀರಿಸುವುದಾಗಿ ಹೇಳಿದ ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ, ಜೂ. 6- ಗಣಿ, ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರುಗಳು ಬೃಹತ್ ರೋಡ್ ಶೋ ಮೂಲಕ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ನಗರದ ವೀರಮದಕರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಆರಂಭಿಸಲಾಯಿತು.
ವೀರಮದಕರಿ ನಾಯಕ ವೃತ್ತದಿಂದ ಆರಂಭವಾದ ರೋಡ್ ಶೋ ದುರ್ಗಾಂಬಿಕ ದೇವಸ್ಥಾನದ ಬಳಿಯ ಶಿವಾಜಿ ವೃತ್ತ, ಹಗೇದಿಬ್ಬ ವೃತ್ತ, ಆಜಾದ್‌ನಗರ ಮುಖ್ಯ ರಸ್ತೆ, ಅಖ್ತರ್ ರಜ್ಹಾ ಸರ್ಕಲ್, ಬಾಷಾನಗರ, ಮಾಗಾನಹಳ್ಳಿ ರಸ್ತೆ, ಅರಳಿಮರ ಸರ್ಕಲ್, ವೆಂಕಟೇಶ್ವರ ಸರ್ಕಲ್‌ನಲ್ಲಿ ಸಮಾಪನೆಗೊಂಡಿತು.
ಸಚಿ ವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ತಂದೆಯವರ ಮೇಲೆ ವಿಶ್ವಾಸವಿಟ್ಟು ಈ ಭಾಗದ ಜನರು ಸತತವಾಗಿ ಗೆಲ್ಲಿಸಿಕೊಂಡು ಬರುತ್ತಿದ್ದು, ನಿಮ್ಮ ಋಣವನ್ನು ನಾವು ತೀರಿಸುತ್ತೇವೆ ಎಂದರು.
ಕಳೆದ 7 ವರ್ಷಗಳ ಹಿಂದೆ ನಮ್ಮ ಅವಧಿಯಲ್ಲೇ ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆ ಆಗಿದ್ದು, ಈ ಯೋಜನೆಯನ್ನು ಈ ಭಾಗಕ್ಕೆ ಸೀಮಿತವಾಗಿ ಅಭಿವೃದ್ಧಿಗೊಳಿಸಲಾಯಿತು. ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದರು.
ರಾಜ್ಯದಲ್ಲಿ ಶೇ.40 ರಷ್ಟು ಕಮೀಷನ್ ಸರ್ಕಾರ ಹೋಗಿ ಜನಪರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಾವು ಚುನಾವಣೆಗೂ ಮುನ್ನ ಭರವಸೆ ನೀಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ ಬಿಜೆಪಿ ಇಂದು ಯೋಜನೆಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಇದರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕೆಂದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಈ ಭಾಗದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಸತತ ಗೆಲ್ಲಿಸುತ್ತಾ ಬಂದಿದ್ದು, ನಿಮ್ಮೆಲ್ಲರ ಸಹಕಾರಕ್ಕೆ ಕೃತಜ್ಞನಾಗಿದ್ದೇನೆ ಎಂದರು.
ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್, ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್, ಅಯೂಬ್ ಪೈಲ್ವಾನ್, ದೂಡಾ ಮಾಜಿ ಅಧ್ಯಕ್ಷ ಮಾಲತೇಶರಾವ್ ಜಾಧವ್, ತಂಜೀಂ ಕಮಿಟಿ ದಾದು ಶೇಟ್, ಮುಖಂಡರಾದ ಹೆಚ್.ಬಿ. ಗೋಣೆಪ್ಪ, ಸೈಯದ್ ಸೈಫುಲ್ಲಾ ,ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಎ. ನಾಗರಾಜ್, ಎ.ಬಿ. ರಹೀಂ, ಸೈಯದ್ ಚಾರ್ಲಿ, ಜಿ.ಡಿ. ಪ್ರಕಾಶ್, ಜಾಕೀರ್, ಕಬೀರ್, ಶಫೀಕ್ ಪಂಡಿತ್, , ಕೋಳಿ ಇಬ್ರಾಹಿಂ, ಎಸ್.ಎಲ್. ಆನಂದಪ್ಪ, ಎನ್.ಜೆ. ನಿಂಗಪ್ಪ, ಬೆಲ್ಲದ ಶಂಕರ್, ಹೆಚ್.ಬಿ. ಗೋಣೆಪ್ಪ, ಎಂ.ಮಂಜುನಾಥ್, ಶಾಮನೂರು ವೇದಮೂರ್ತಿ, ಸಿಮೇಎಣ್ಣೆ ಮಲ್ಲೇಶ್, ಬಿ. ವೀರಣ್ಣ, ರವಿ ಗಾಂಧಿ, ಬಾಬುರಾವ್ ಸಾಳಂಕಿ, ಜಮ್ನಳ್ಳಿ ನಾಗರಾಜ್, ಎಂ.ಹಾಲೇಶ್, ಕಿರುವಾಡಿ ಸೋಮಶೇಖರ್, ಬಾಳೆಹೊಲದ ಸಿದ್ದೇಶ್, ಟಿ.ರಮೇಶ್, ಬರ್ಕತ್ ಅಲಿ, ಗಂಗರಾಜ್ ಮತ್ತು ಇತರರು ಭಾಗವಹಿಸಿದ್ದರು.