ಹರಿಹರ, ಮೇ 30 – ತಾಲ್ಲೂಕಿನ ಗ್ರಾಮೀಣ ಪ್ರದೇಶದ 176 ಅಂಗನ ವಾಡಿ ಕೇಂದ್ರಗಳು ಮತ್ತು ನಗರ ಪ್ರದೇಶದ 83 ಅಂಗನ ವಾಡಿ ಕೇಂದ್ರಗಳು ಪುನರಾ ರಂಭಗೊಂಡಿದ್ದು ಮಕ್ಕಳಿಗೆ ಪುಷ್ಪ ಕೊಡುವುದರ ಮೂಲಕ ಸ್ವಾಗತಿಸಿ, ದೈನಂದಿನ ಕಾರ್ಯಚಟು ವಟಿಕೆಗಳನ್ನು ಆರಂಭಿಸ ಲಾಯಿತು ಎಂದು ಸಿಡಿಪಿಓ ಪೂರ್ಣಿಮಾ ತಿಳಿಸಿದರು.
ಬೇಸಿಗೆ ರಜೆ ದಿನಗಳ ಕಾಲ ಮುಗಿದಿದ್ದರಿಂದ, ಇಂದಿನಿಂದ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಕಾರ್ಯಗಳು ಎಂದಿನಂತೆ ನಡೆಯುತ್ತಿವೆ. ಇಂದು ಶಾಲೆಯಲ್ಲಿ ಶಾರದಾ ಪೂಜೆಯೊಂದಿಗೆ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಪುಷ್ಪಗಳನ್ನು ನೀಡುವ ಮೂಲಕ ಆರತಿ ಮಾಡಲಾಯಿತು. ಸೆಲ್ಫಿ ಪೋಟೋ ತೆಗೆದು ಸ್ವಾಗತಿಸಲಾಗಿದೆ ಮತ್ತು ಕೇಂದ್ರಗಳನ್ನು ಮಾವಿನ ಸೊಪ್ಪು, ಪುಷ್ಪಗಳಿಂದ ಶೃಂಗಾರ ಮಾಡಿ ಅಲಂಕಾರ ಮಾಡಲಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮೀ, ಜ್ಯೋತಿ, ಮಂಜುಳಾ, ಶೈಲಾ ಮೈದೂರು, ಅಂಗನವಾಡಿ ಶಿಕ್ಷಕರಾದ ಬೇಬಿ ಅಮರಾವತಿ, ಸುಧಾ ನಂದಿಗುಡಿ, ಲಲಿತಾ ಉಪಸ್ಥಿತರಿದ್ದರು.