ಮತದಾನ ಪವಿತ್ರ ಕಾರ್ಯ, ಮರೆಯದೆ ಹಕ್ಕು ಚಲಾಯಿಸಿ

ಮತದಾನ ಪವಿತ್ರ ಕಾರ್ಯ, ಮರೆಯದೆ ಹಕ್ಕು ಚಲಾಯಿಸಿ

ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮತದಾನದ ಜಾಗೃತಿ

ದಾವಣಗೆರೆ, ಮೇ 9- ಮತದಾನ ಪವಿತ್ರ ಕಾರ್ಯವಾಗಿದ್ದು, ಸಾರ್ವಜನಿಕರು ತಪ್ಪದೇ ತಮ್ಮ ಹಕ್ಕು ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು `ಪ್ರಜಾವಾಣಿ’ ಪತ್ರಿಕೆ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ್ ಮನವಿ ಮಾಡಿದರು.

ದಾವಣಗೆರೆ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ನಗರದ ಶ್ರೀ ಜಯದೇವ ಮುರುಘ ರಾಜೇಂದ್ರ ವೃತ್ತದಲ್ಲಿ ನಿನ್ನೆ ಆಯೋ ಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಗುಲಾಬಿ ಹೂ ಮತ್ತು ಚಾಕೋಲೇಟ್ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಗಟ್ಟಿಗೊಂಡು ಸರ್ವರಿಗೂ ನ್ಯಾಯ ಸಿಗಬೇಕಾದರೆ ಪ್ರತಿಯೊಬ್ಬರೂ ಮತದಾನ ಕಾರ್ಯದಲ್ಲಿ ಭಾಗಿಯಾಗಬೇಕು. ಮತದಾನ ನಮಗೆ ಸಂವಿಧಾನ ನೀಡಿದ ಅಸ್ತ್ರವಾಗಿದ್ದು, ಶ್ರೇಷ್ಠ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.

ವರದಿಗಾರರ ಕೂಟದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಕಬ್ಬೂರು ಮಾತನಾಡಿ, ಸರ್ಕಾರ ಮತದಾನ ಜಾಗೃತಿಗಾಗಿ ಎರಡು ದಶಕದಿಂದ ಸಾಕಷ್ಟು ಕಾರ್ಯಕ್ರಮ ಆಯೋ ಜಿಸಿದ್ದರೂ ಶೇಕಡ ನೂರು ಮತದಾನದ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಸಂವಿಧಾನದ ಲಾಭ ಸರ್ವರಿಗೂ ದೊರೆಯಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಅರ್ಹ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಸುಶಿಕ್ಷಿತರೇ ಮತದಾನ ಕರ್ತವ್ಯ ಪಾಲನೆ ಮಾಡದಿರುವುದು ಶೋಚನೀಯ ಸಂಗತಿ. ಪ್ರಜಾಪ್ರಭುತ್ವ ಅರ್ಥ ಪೂರ್ಣವಾಗ ಬೇಕಾದರೆ ಪ್ರತಿಯೊ ಬ್ಬರೂ ತಪ್ಪದೇ ಮತದಾನ ಮಾಡ ಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎ. ಫಕೃದ್ಧೀನ್ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಎನ್.ವಿ. ಬದ್ರಿನಾಥ್, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಉಪಾಧ್ಯಕ್ಷ ಆರ್.ಎಸ್. ತಿಪ್ಪೇಸ್ವಾಮಿ, ಕಾರ್ಯದರ್ಶಿ ಜಿ.ಎಸ್. ವೀರೇಶ್, ನಿರ್ದೇಶಕರುಗಳಾದ ಎನ್. ಕೃಷ್ಣೋಜಿರಾವ್, ಬಿ.ಎಸ್. ಮುದ್ದಯ್ಯ, ಚನ್ನವೀರಯ್ಯ, ಬಿ.ವಿ. ಅನಿಲ್‍ಕುಮಾರ್, ಎ.ಬಿ. ರುದ್ರಮ್ಮ, ಶಿವಮೂರ್ತಿ, ಮಂಜುನಾಥ್, ಛಾಯಾಗ್ರಾಹಕರಾದ ವಿವೇಕಾನಂದ ಬದ್ದಿ, ಮೊಹಮ್ಮದ್ ರಫೀಕ್, ಸತೀಶ್, ಮಂಜುನಾಥ್ ಮತ್ತಿತರರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!