ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆ ನಾಗರಾಜ್ ಲೋಕಿಕೆರೆ ನಾಮಪತ್ರ ಸಲ್ಲಿಕೆ

ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆ ನಾಗರಾಜ್ ಲೋಕಿಕೆರೆ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ. 20-  ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ  ಅಪಾರ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಿದರು. 

ನಿಟ್ಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿ, ತೆರೆದ ವಾಹನದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆ ಮೂಲಕ ಪಾಲಿಕೆ ಕಾರ್ಯಾಲಯಕ್ಕೆ ಆಗಮಿಸಿದರು.

ಮೆರವಣಿಗೆಯು ಹೆಚ್.ಕೆ.ಆರ್. ವೃತ್ತ, ಕೆಟಿಜೆ ನಗರ ಪೊಲೀಸ್ ಠಾಣೆ ವೃತ್ತ, ಕೆಟಿಜಿ ನಗರದ 2ನೇ ಅಡ್ಡ ರಸ್ತೆ, ಶಿವಪ್ಪಯ್ಯ ಸರ್ಕಲ್, ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಪಿ.ಬಿ. ರಸ್ತೆಯ ಮೂಲಕ ಪಾಲಿಕೆವರೆಗೆ ಸಾಗಿತು.

ಮೆರವಣಿಗೆಯಲ್ಲಿ ಕಾರ್ಯಕ ರ್ತರು ಉತ್ಸಾಹದಿಂದ ಭಾಗವಹಿಸಿ,  ಅಭ್ಯರ್ಥಿ ನಾಗರಾಜ ಲೋಕಿಕೆರೆ ಅವರ ಗೆಲುವಿಗೆ ಜೈಕಾರ, ಘೋಷಣೆ  ಕೂಗಿದರು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಮೆರೆವಣಿಗೆಯಲ್ಲಿ ಆಂಜನೇಯ ವೇಷಧಾರಿಗಳಿದ್ದರು. ಯುವಕರು ಮೋದಿ ಮುಖವಾಡ ಧರಿಸಿದ್ದರು. ಹರಿಹರದ ಹರೀಶ್  ಎಂಬ ಯುವಕ ದೇಹದ ಮೇಲೆ ಬಿಜೆಪಿ ಚಿಹ್ನೆ, ಅಭ್ಯರ್ಥಿ ಹೆಸರು ಬರೆದುಕೊಂಡು ಗಮನ ಸೆಳೆದ.

ಮೆರವಣಿಗೆಯಲ್ಲಿ ಮಹಿಳೆಯರಿ ಗಾಗಿಯೇ ಪ್ರತ್ಯೇಕ ವಾಹನ ಮೀಸಲಿಡಲಾಗಿತ್ತು. ಲೋಕಿಕೆರೆ ನಾಗರಾಜ್ ಪತ್ನಿ ಲತಾ ನಾಗರಾಜ್ ಲೋಕಿಕೆರೆ, ಪಾಲಿಕೆ ಸದಸ್ಯೆಯರಾದ ಉಮಾ ಪ್ರಕಾಶ್, ಹೆಚ್.ಸಿ. ಜಯಮ್ಮ, ಬಿಜೆಪಿ ಜಿಲ್ಲಾ ಮಹಿಳಾ ಅಧ್ಯಕ್ಷ ಮಂಜುಳಾ ಮಹೇಶ್ ಮತ್ತಿತರರಿದ್ದರು. ದೇವಸ್ಥಾನದ ಬಳಿ ಮಹಿಳಾ ಕಾರ್ಯಕರ್ತೆಯರು ನೃತ್ಯ ಮಾಡಿ ಸಂಭ್ರಮಿಸಿದರು.

ದೇವಸ್ಥಾನದ ಬಳಿ ಸಂಸದ ಜಿ.ಎಂ. ಸಿದ್ದೇಶ್ವರ ಆಗಮಿಸಿ ನಾಗರಾಜ ಲೋಕಿಕೆರೆ ಅವರಿಗೆ ಶುಭ ಕೋರಿದರು. ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ ಹನಗವಾಡಿ, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಮುಖಂಡರಾದ ಬಿ.ಎಸ್. ಜಗದೀಶ್, ಪಾಲಿಕೆ ಸದಸ್ಯರಾದ ಎಸ್.ಟಿ ವೀರೇಶ್, ಪ್ರಸನ್ನ ಕುಮಾರ್, ಕೆ.ಎಂ. ಸುರೇಶ್, ಜೆ.ಎನ್. ಶ್ರೀನಿವಾಸ್, ಮುಖಂಡರಾದ ಎನ್ ರಾಜಶೇಖರ್, ಪಿ.ಸಿ. ಶ್ರೀನಿವಾಸ್, ಎನ್.ಎ. ಮುರುಗೇಶ್, ಶ್ರೀನಿವಾಸ್ ದಾಸಕರಿಯಪ್ಪ, ಸಂಗನಗೌಡ್ರು, ಧನಂಜಯ್ ಕಡ್ಲೆಬಾಳು, ಜೊಳ್ಳಿ ಗುರು, ಕುಮಾರ್ ಇನ್ನಿತರರು ನಾಗರಾಜ್ ಲೋಕಿಕೆರೆ ಅವರಿಗೆ ಸಾಥ್ ನೀಡಿದರು.

error: Content is protected !!