ಹೊನ್ನಾಳಿ,ಏ. 18- ಶಾಸಕ ಎಂ.ಪಿ. ರೇಣುಕಾಚಾರ್ಯ ಅವರೇ ನನಗೆ ಎನರ್ಜಿ, ಅವರಿಗೆ ನಾನು ಅಲರ್ಜಿ ಎಂಬುದಾಗಿ ವಿಧಾನ ಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ಮಾರ್ಮಿಕವಾಗಿ ವಿಶ್ಲೇಷಿಸಿದರು.
ತಾಲ್ಲೂಕಿನ ಗೊಲ್ಲರಹಳ್ಳಿಯಿಂದ ಮೆರವಣಿಗೆ ಮೂಲಕ ಆಗಮಿಸಿ, ನಾಮಪತ್ರ ಸಲ್ಲಿಕೆಯ ಮುನ್ನ ನಡೆದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಆಹಾರ ಭದ್ರತೆ, ಉಳುವವನೇ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ಯುವಕರಿಗೆ ಮಾತದಾನದ ಹಕ್ಕು, ಇಂದಿರಾ ಕ್ಯಾಂಟೀನ್ ಸೇರಿದಂತೆ ಅನೇಕ ಹತ್ತು ಹಲವಾರು ಯೋಜನೆಗಳು ಬಡವರಿಗೆ ವರದಾನವಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್‌ಸಾಬ್ ಮಾತನಾಡಿ, ಸುಭದ್ರ, ಸ್ಥಿರ ಸರ್ಕಾರ ರಚನೆಗಾಗೆ ಕಾಂಗ್ರೆಸ್ಸಿನ ಅಭ್ಯರ್ಥಿ ಶಾಂತನಗೌಡರನ್ನು ಮತದಾರರು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಡಿ.ಜಿ.ಬಸವನಗೌಡರ ಪುತ್ರ ಡಾ.ಪ್ರಕಾಶ್ ಮಾತನಾಡಿ, ನಮ್ಮ ಚಿಕ್ಕಪ್ಪ ಶಾಂತನಗೌಡರಿಗೆ ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲಾಗಿದೆ. 1938 ರಿಂದಲೂ ನಮ್ಮ ಕುಟುಂಬವು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜನರ ಸೇವೇ ಮಾಡುತ್ತಾ ಬಂದಿದೆ. ಈ ಹಿಂದೆ ಗೆಲ್ಲಿಸಿದಂತೆ ಈ ಚುನಾವಣೆಯಲ್ಲೂ ಗೆಲ್ಲಿಸಬೇಕೆಂದರು.
ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಹೆಚ್.ಬಿ. ಶಿವಯೋಗಿ, ನ್ಯಾಮತಿ ಘಟಕದ ಅಧ್ಯಕ್ಷ ವಿಶ್ವನಾಥ್ ದೊಡ್ಡೇರಿ, ಸಾಸ್ವೆಹಳ್ಳಿ ಘಟಕದ ಅಧ್ಯಕ್ಷ ಆರ್. ನಾಗಪ್ಪ, ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ದಾವಣಗೆರೆ ಘಟಕದ ಅಧ್ಯಕ್ಷ ಸುಭಾಷ್, ಬಿ. ವೀರಣ್ಣ, ಸಣ್ಣಕ್ಕಿ ಬಸವನಗೌಡ, ವರದರಾಜಪ್ಪ, ಶಿವರಾಮನಾಯ್ಕ, ಡಾ. ಈಶ್ವರನಾಯ್ಕ, ಹೆಚ್.ಎ. ಉಮಾಪತಿ, ಎಂ. ರಮೇಶ್, ಬಿ. ಸಿದ್ಧಪ್ಪ, ಸಾಸ್ವೆಹಳ್ಳಿ ಗದಿಗೇಶ್, ಕೆಂಗಲಹಳ್ಳಿ ಷಣ್ಮುಖಪ್ಪ, ಜಬ್ಬಾರ್, ವಾಜೀದ್, ಮೈಲಪ್ಪ, ಕೊಡತಾಳ್ ರುದ್ರೇಶ್, ತಮ್ಮಣ್ಣ, ಮಧುಗೌಡ, ಪ್ರಶಾಂತ್ ಬಣ್ಣಜ್ಜಿ, ನ್ಯಾಮತಿ ವಾಗೀಶ್, ಹನುಮನಹಳ್ಳಿ ಬಸವರಾಜಪ್ಪ, ಕೆಂಗಲಹಳ್ಳಿ ಪ್ರಭಾಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.