ಎಸ್.ಎಸ್. ವೈದ್ಯಕೀಯ ಕಾಲೇಜಿನಲ್ಲಿ ಕಾರ್ನಿಯಾ ಕಾರ್ಯಾಗಾರ

ಎಸ್.ಎಸ್. ವೈದ್ಯಕೀಯ ಕಾಲೇಜಿನಲ್ಲಿ ಕಾರ್ನಿಯಾ ಕಾರ್ಯಾಗಾರ

ದಾವಣಗೆರೆ, ಏ.18- `ನೇತ್ರದಾನ ಮಹಾದಾನ’ ನಮ್ಮೆಲ್ಲರಿಗೂ ತಿಳಿದಿರುವಂತೆ ಒಬ್ಬ ವ್ಯಕ್ತಿ ನೇತ್ರದಾನ ಮಾಡಿದ ನಂತರ ಆ ಕಣ್ಣಿನ ಬಹುಮುಖ್ಯ ಭಾಗವಾದ ಕರಿಗುಡ್ಡೆ (ಕಾರ್ನಿಯಾ)ಯನ್ನು ಮತ್ತೊಬ್ಬ ಕಾರ್ನಿಯ ಅಂಧತ್ವದಿಂದ ಬಳಲುತ್ತಿರುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ.

ನಮ್ಮ ದೇಶದಲ್ಲಿ ಸುಮಾರು 1.6 ಮಿಲಿಯನ್ ನಷ್ಟು ಜನರು ಒಂದು ಕಣ್ಣಿನ ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ಸುಮಾರು ಒಂದು ಮಿಲಿಯನ್ ನಷ್ಟು ಜನ ಎರಡೂ ಕಣ್ಣಿನ ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. 

ಇಂತಹ ಕಣ್ಣಿನ ಬಹುಮುಖ್ಯ ಭಾಗವಾದ ಕರಿಗುಡ್ಡೆ (ಕಾರ್ನಿಯ) ಕುರಿತು ರಾಜ್ಯದ ಹಲವು ನುರಿತ ತಜ್ಞ ವೈದ್ಯರಿಂದ ಮುಂದುವರೆದ ವೈದ್ಯಕೀಯ ಶಿಕ್ಷಣ ಶಿಬಿರವನ್ನು (ಕಂಟಿನ್ಯೂಡ್‌ ಮೆಡಿಕಲ್‌ ಎಜುಕೇಷನ್‌) ನಗರದ ಎಸ್.ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆಸಲಾಯಿತು.

ಈ ಕಾರ್ಯಾಗಾರದಲ್ಲಿ ಕಾರ್ನಿಯಾದಲ್ಲಿನ ಸೋಂಕುಗಳು ಕಣ್ಣಿಗೆ ಪೆಟ್ಟು, ಸುಣ್ಣ ಇತ್ಯಾದಿ ರಾಸಾಯನಿಕ ವಸ್ತುಗಳಿಂದ ಆಗುವ ಹಾನಿ ಕೆರಾಟೋಕೋನಸ್ ಹಾಗೂ ಕಾರ್ನಿಯಾದ ಅತ್ಯುನ್ನತ ಪರೀಕ್ಷಾ ವಿಧಾನಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು. 

ಕಾಲೇಜಿನ ವೈದ್ಯಕೀಯ ನಿರ್ದೇಶಕ
ಡಾ|| ಅರುಣ್ ಕುಮಾರ್ ಅಜ್ಜಪ್ಪ, ಹಿರಿಯ ನೇತ್ರ ತಜ್ಞ ಡಾ|| ರವೀಂದ್ರ ಬಣಕಾರ್, ಡಾ|| ಸೂರ್ಯ ಪ್ರಕಾಶ್, ಡಾ|| ಸುರೇಂದ್ರ ಶೆಟ್ಟಿ, ಡಾ|| ಹಿರೇಮಠ್, ವಿಭಾಗದ ಮುಖ್ಯಸ್ಥರಾದ ಡಾ|| ಅಜಯ್ ಎಸ್. ಹತ್ತಿ ಮತ್ತು ಇತರರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.  

ಡಾ|| ಶಾಂತಲಾ ಅರುಣ್ ಕುಮಾರ್ ಸ್ವಾಗತಿಸಿದರು. ಡಾ|| ರೇಣುಕಾ ಬರ್ಕಿ ವಂದಿಸಿದರು.

error: Content is protected !!