ಅಭಿವೃದ್ಧಿ ಕೆಲಸಗಳೇ ಶ್ರೀ ರಕ್ಷೆ: ಎಸ್ಸೆಸ್ಸೆಂ

ಅಭಿವೃದ್ಧಿ ಕೆಲಸಗಳೇ ಶ್ರೀ ರಕ್ಷೆ: ಎಸ್ಸೆಸ್ಸೆಂ

ದಾವಣಗೆರೆ, ಮೇ 17- ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳೇ ನಮಗೆ ಶ್ರೀರಕ್ಷೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು. ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ನಾನು ಸಚಿವ, ಶಾಸಕರಾಗಿದ್ದಾಗ ಜಿಲ್ಲೆ ಹಾಗೂ ನಗರವನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಿದ್ದೆ. ಈ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಎಂದರು. ಬಿಜೆಪಿ ಮುಖಂಡರು ಯಡಿಯೂರಪ್ಪ ಅವರನ್ನು ಹೆದರಿಸಿ ತಾಳಕ್ಕೆ ತಕ್ಕಂತೆ ಕುಣಿಯುವ ಗೊಂಬೆ ಮಾಡಿದ್ದಾರೆ. ಲಿಂಗಾಯತರಿಗೆ ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲ. ಜಗದೀಶ್ ಶೆಟ್ಟರ್‌, ಸವದಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಇನ್ನೂ ಅನೇಕರು ಬರಲಿದ್ದಾರೆ ಎಂದರು.

ಬಿಜಿಪಿಯಲ್ಲಿ ಕೆಲ ಜಾತಿಗಳಿಗೆ ಮಾತ್ರ ಹೆಚ್ಚು ಆದ್ಯತೆ ಕೊಡಲಾಗುತ್ತಿದೆ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲಾ ಜಾತಿಗೂ ಸಮಾನ ಆದ್ಯತೆ ನೀಡಲಾಗುತ್ತದೆ ಎಂದರು.

ಕಳೆದ ಏ.13ರಂದು ನಾಮಪತ್ರ ಸಲ್ಲಿಸಿದ್ದೆ. ಅಂದು ಬಿ ಫಾರಂ ಬಂದಿರಲಿಲ್ಲ. ಇಂದು ಬಿ ಫಾರಂ ಸಲ್ಲಿಸಿದ್ದೇನೆ ಎಂದು ಎಸ್ಸೆಸ್ಸೆಂ ಹೇಳಿದರು. ಎಸ್ಸೆಸ್ಸೆಂ ಅವರ ಜೊತೆ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮಾಜಿ ಉಪ ಮೇಯರ್ ಬಿ.ಲೋಕೇಶ್, ಪಾಲಿಗೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಮುಖಂಡ ಆರ್.ಎಸ್. ಶೇಖರಪ್ಪ ಇದ್ದರು.

error: Content is protected !!