ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಭಿನ್ನಮತ ಇಲ್ಲ. ನನಗೆ ಟಿಕೆಟ್ ಕೊಟ್ಟ ಮೇಲೆ ಸಭೆಗಳು ನಡೆದಿರುವುದು ನಿಜ. ಆದರೆ ಅದು ಬಂಡಾಯದಿಂದಲ್ಲ. ಪಕ್ಷವನ್ನು ಗೆಲ್ಲಿಸುವ ಕುರಿತು ನಡೆದ ಸಭೆಗಳು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹೇಳಿದರು. ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನಾದ ನನಗೆ ಬಿಜೆಪಿಯಿಂದ ಟಿಕೆಟ್ ಕೊಟ್ಟಿರುವುದು ಸಂತೋಷದ ವಿಚಾರ. ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದ ಅವರು, ಬುಧವಾರ ಅಥವಾ ಗುರುವಾರ ಸಂಸದ ಸಿದ್ದೇಶ್ವರ, ಶಾಸಕ ರವೀಂದ್ರನಾಥ್ ಸೇರಿದಂತೆ ಮುಖಂಡರು, ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ಅವರು ಹೇಳಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಲೋಕಿಕೆರೆ ನಾಗರಾಜ್ ಪೋಷಕರು, ಹಿರಿಯ ಆಶೀರ್ವಾದ ಪಡೆದರು. ಬರಿಗಾಲಲ್ಲಿಯೇ ಪಾಲಿಕೆಗೆ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಗರಾಜ್ ಲೋಕಿಕೆರೆ ಅವರ ಧರ್ಮಪತ್ನಿ ಶ್ರೀಮತಿ ಲತಾ ನಾಗರಾಜ್ ಲೋಕಿಕೆರೆ, ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಜಿಲ್ಲಾ ಬಿಜೆಪಿ ದಾವಣಗೆರೆ ಉತ್ತರ ಮಂಡಲದ ಅಧ್ಯಕ್ಷರಾದ ಸಂಗನಗೌಡ ಪಾಟೀಲ್, ವಕೀಲರಾದ ದಿವಾಕರ್ ಸೇರಿದಂತೆ ಇತರರು ಇದ್ದರು.