ಎಸ್.ಎಸ್. ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್
ದಾವಣಗೆರೆ, ಏ.13- ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳು ಮತ್ತು ಲಸಿಕೆ ನಂತರದ ಪ್ರತಿಕೂಲ ಘಟನೆಗಳ ಕಣ್ಗಾವಲು ಕುರಿತು ಕಾರ್ಯಾಗಾರವನ್ನು ಸಮುದಾಯ ವೈದ್ಯಕೀಯ ವಿಭಾಗ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಜಂಟಿ ಸಹಯೋಗದೊಂದಿಗೆ ನಗರದ ಎಸ್.ಎಸ್. ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಇಂದು ನಡೆಸಲಾಯಿತು.
ಎಸ್.ಎಸ್. ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್ ಮಾತನಾಡಿ, ಲಸಿಕೆಗಳು ಮಗುವಿನ ಜೀವ ಕಾಪಾಡುವ ಸಾಧನಗಳು ಮತ್ತು ಲಸಿಕಾ ನಂತರದ ಪ್ರತಿಕೂಲ ಘಟನೆಗಳ ಕಣ್ಗಾವಲು ಕುರಿತು ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ತಿಳಿದುಕೊಳ್ಳಬೇಕೆಂದು ಹೇಳಿದರು.
ವೈದ್ಯಕೀಯ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಅಜ್ಜಪ್ಪ ಮಾತನಾಡಿ ಮಕ್ಕಳು ಮತ್ತು ವಯಸ್ಕರಲ್ಲಿ ಲಸಿಕೆ ಮಹತ್ವದ ಕುರಿತು ತಿಳಿಸಿದರು
ವಿಶ್ವ ಆರೋಗ್ಯ ಸಂಸ್ಥೆಯ ಡಾ. ಶ್ರೀಧರ್ ಆರ್.ಎಸ್, (ಎಸ್.ಎಮ್ ಓ) ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳ ಕಣ್ಗಾವಲು ಮತ್ತು ಲಸಿಕೆ ನಂತರದ ಪ್ರತಿಕೂಲ ಘಟನೆಗಳ ಕುರಿತು ವಿವರವಾಗಿ ಕಾರ್ಯಗಾರದಲ್ಲಿ ಮಾತನಾಡಿದರು.
ಡಾ. ಮೀನಾಕ್ಷಿ ಕೆ.ಎಸ್ (ಆರ್.ಸಿ.ಹೆಚ್. ದಾವಣಗೆರೆ) ದಡಾರ ಮತ್ತು ರುಬೆಲ್ಲಾ ರೋಗಗಳ ನಿವಾರಣೆ ಬಗ್ಗೆ ವಿವರಿಸಿದರು.
ಡಾ. ಕಿರಣ್ ಎಲ್.ಜೆ. ವಿಭಾಗ ಮುಖ್ಯಸ್ಥರು, ಫಾರ್ಮಾಕಾಲಜಿ ಮಾತನಾಡಿ, ಲಸಿಕೆ ನಂತರದ ಪ್ರತಿಕೂಲ ಘಟನೆಗಳಾದ ಸಂದರ್ಭದಲ್ಲಿ ರೋಗಿಯ ಬಗ್ಗೆ ಮಾಹಿತಿ ಮತ್ತು ಪ್ರತಿಕೂಲ ಘಟನೆಗಳ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವ ಕುರಿತು ಮಾತನಾಡಿದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನ್ ಕುಮಾರ್, ಮಕ್ಕಳ ತಜ್ಞ ಡಾ. ವಿನಯ್ ಕುಮಾರ್ ಅವರು ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳ ಕಣ್ಗಾವಲು ಮಹತ್ವವನ್ನು ತಿಳಿಸಿದರು.
ಹಾವೇರಿ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾ ಪಕರಾದ ಡಾ. ಪಿ. ಶೀಲಾ ಅವರು ವೈದ್ಯಕೀಯ ಆಸ್ಪತ್ರೆಯಲ್ಲಿ ಕಣ್ಗಾವಲು ಬಲಪಡಿಸುವ ಕುರಿತು ಮಾಹಿತಿ ನೀಡಿದರು.