ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ನಿವಾಸಿ ನಿವೃತ್ತ ಕೃಷಿ ಸಹಾಯಕ ನಿರ್ದೇಶಕರಾದ ಎಸ್.ಸಿ. ಹುಲ್ಲತ್ತಿ ಇವರ ಧರ್ಮಪತ್ನಿ ಶ್ರೀಮತಿ ಸುಶೀಲ ಹುಲ್ಲತ್ತಿ ಇವರು ದಿನಾಂಕ 5-3-2023ರ ಭಾನುವಾರ ಬೆಳಿಗ್ಗೆ 10.45 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 6-3-2023ರ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 21, 2025