ಹರಿಹರ ತಾಲ್ಲೂಕು ನೆಹರೂ ನಗರ ವಾಸಿ ದಾವಣಗೆರೆ ಜಿಲ್ಲಾ ಕಮ್ಮವಾರಿ ಸಂಘದ ಸಂಸ್ಥಾಪಕ ನಿರ್ದೇಶಕರಾದ ಶ್ರೀ ಕೊಲ್ಲಿ ಭೋಗೇಶ್ವರರಾವ್ ಅವರು ದಿನಾಂಕ 12.2.2023ರ ಭಾನುವಾರ ಸಂಜೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 86 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 13-2-2023ರ ಸೋಮವಾರ ಬೆಳಿಗ್ಗೆ 10 ಕ್ಕೆ ಮೃತರ ಸ್ವಗ್ರಾಮ ಹರಿಹರ ತಾಲ್ಲೂಕಿನ ನೆಹರೂ ನಗರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 21, 2025