ದಾವಣಗೆರೆ ಪಿ.ಜೆ. ಬಡಾವಣೆ 6ನೇ ಮುಖ್ಯ ರಸ್ತೆ, 6ನೇ ತಿರುವಿನಲ್ಲಿ ವಾಸವಾಗಿರುವ ಶ್ರೀ ಅಶೋಕ ಪಾಂಡುರಂಗ ವೆರ್ಣೇಕರ್ (PBV) ಇವರು, ದಿನಾಂಕ : 16.02.2023ರ ಗುರುವಾರ ರಾತ್ರಿ 08.15 ಗಂಟೆಗೆ ದೈವಾಧೀನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 67 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ 17.02.2023ರ ಶುಕ್ರವಾರ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ದಿವಂಗತರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಸಂಜೆ 5 ಗಂಟೆಗೆ ವೈಕುಂಠಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 26, 2024