ದಾವಣಗೆರೆ ತಾಲ್ಲೂಕು ಚಿನ್ನಸಮುದ್ರ ವಾಸಿ ದಿ. ಗೌಡ್ರ ಬಸಪ್ಪನವರ ಧರ್ಮಪತ್ನಿ ಶ್ರೀಮತಿ ರತ್ನಮ್ಮ ಇವರು ದಿನಾಂಕ 4.02.2023ರ ಶನಿವಾರ 7.10ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ನಾಲ್ವರು ಪುತ್ರರು, ಏಳು ಜನ ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 5.02.2023ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ಮೃತರ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಚಿನ್ನಸಮುದ್ರ ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 20, 2025