ಹರಿಹರ ಕ್ಷೇತ್ರದ ಮಾಜಿ ಶಾಸಕರಾದ ದಿ|| ಬೂದಿಹಾಳ್ ಬಸವನಗೌಡರ ಧರ್ಮಪತ್ನಿ ಹಾಗೂ ಮಾಜಿ ಶಾಸಕರಾದ ಬಿ.ಪಿ. ಹರೀಶ್ಖ್ಯಾತ ಕೀಲು ಮೂಳೆ ತಜ್ಞರಾದ ಡಾ|| ಪ್ರಭು ಬಸವನಗೌಡ ವರ್ತಕರಾದ ಬಿ.ಪಿ. ಸುರೇಶ್ ಮತ್ತು ಶ್ರೀಮತಿ ರೇಣುಕಾ ಮಹದೇವಗಾಂಧಿ ಇವರ ತಾಯಿಯವರಾದ ಶ್ರೀಮತಿ ಕಮಲಮ್ಮ ಬೂದಿಹಾಳ್ ಬಸವನಗೌಡ (80 ವರ್ಷ) ಇವರು ದಿನಾಂಕ : 04.02.2023ರ ಶನಿವಾರ ಬೆಳಿಗ್ಗೆ 10.20ಕ್ಕೆ ಶಿವೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೂವರು ಪುತ್ರರು, ಓರ್ವ ಪುತ್ರಿ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಪಾರ್ಥಿವ ಶರೀರವನ್ನು ದಿನಾಂಕ : 05.02.2023ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದೇಹ ದಾನ ಮಾಡಲಾಗುವುದು. ಅಲ್ಲಿಯವರೆಗೂ ದಾವಣಗೆರೆಯ ಮನೆಯಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 20, 2025