ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ದಿ. ಹಾಲಿವಾಣದರ ರುದ್ರಪ್ಪನವರ ಧರ್ಮಪತ್ನಿ ಶ್ರೀಮತಿ ಶಾರದಮ್ಮ (74) ಇವರು ದಿನಾಂಕ 01-02-2023 ರ ಬುಧವಾರ ಸಂಜೆ 6 ಗಂಟೆಗೆ ನಿಧನರಾದರು. ಪುತ್ರರಾದ ಶಿಕ್ಷಕ ಹೆಚ್ ರವಿಕುಮಾರ್, ವಿರೂಪಾಕ್ಷಪ್ಪ ಹಾಗೂ ಓರ್ವ ಪುತ್ರಿ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 02-02-2023 ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಜಿಗಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 19, 2025