ದಾವಣಗೆರೆಯ ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಜಯಣ್ಣ, ಲಿಂ. ಶ್ರೀ ಶಾಮನೂರು ಶಿವಪ್ಪ ಅವರ ಜೇಷ್ಠ ಪುತ್ರ ಶ್ರೀ ಎಸ್.ಎಸ್. ಜಯಣ್ಣ ಅವರು ದಿನಾಂಕ 30-01-2023ರ ಸೋಮವಾರ ರಾತ್ರಿ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 78 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಸಹೋದರಿ, ಮೂವರು ಪುತ್ರರು, ಸೊಸೆಯಂದಿರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ನರಸರಾಜ ರಸ್ತೆ, ಎಲ್ಐಸಿ ಆಫೀಸ್ ಹಿಂಭಾಗದಲ್ಲಿರುವ ಅವರ ನಿವಾಸದಲ್ಲಿ ದಿನಾಂಕ 31.01.2023ರ ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಇಡಲಾಗುವುದು. ನಂತರ ಮಧ್ಯಾಹ್ನ 3 ಗಂಟೆಗೆ ಬಂಬೂಬಜಾರ್ನಲ್ಲಿರುವ ಮೃತರ ಶಾಮನೂರು ಶಿವಪ್ಪನವರ ಕಡ್ಲೆ ಹಿಟ್ಟಿನ ಗಿರಣಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 19, 2025