ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್, 10ನೇ ಮೇನ್, 3ನೇ ಕ್ರಾಸ್ ವಾಸಿ, ಸ್ವಾತಂತ್ರ್ಯ ಹೋರಾಟಗಾರರಾದ ದಿ|| ಬಾಳೆಹೊಲದ ಮರುಳಸಿದ್ದಪ್ಪ ಅವರ ಹಿರಿಯ ಪುತ್ರರೂ, ಜಿಲ್ಲಾ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟಗಾರರ ಸಂಘದ ಕಾರ್ಯದರ್ಶಿಗಳೂ, ಶಿವ ಸಹಕಾರಿ ಬ್ಯಾಂಕ್ ಮಾಜಿ ನಿರ್ದೇಶಕರೂ ಆದ ಶ್ರೀ ಬಾಳೆಹೊಲದ ಬಸವರಾಜ ಅವರು ದಿನಾಂಕ 26.09.2020ರ ಶನಿವಾರ ಮಧ್ಯಾಹ್ನ 12.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 56 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಆವರಗೊಳ್ಳ ಗ್ರಾಮದ ಜಮೀನಿನಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024