ಸಾಮಾಜಿಕ ಚಟುವಟಿಕೆಗಳ ಸಕ್ರೀಯ ಕಾರ್ಯಕರ್ತರಾದ ಕ್ರಿಯಾಶೀಲ ವ್ಯಕ್ತಿತ್ವದ ದೊಗ್ಗಳ್ಳಿ ಗೌಡ್ರು ಪುಟ್ಟರಾಜು ಅವರು ಇಂದು ಮಧ್ಯಾಹ್ನ 2.40ಕ್ಕೆ ನಿಧನರಾದರು. ಮೃತರಿಗೆ ಸುಮಾರು 48 ವರ್ಷ ವಯಸ್ಸಾಗಿತ್ತು. ಜೆ.ಹೆಚ್.ಪಟೇಲ್ ಕಾಲೇಜಿನ ಸಂಸ್ಥಾಪಕರಾಗಿದ್ದ ಅವರು, ಅದರ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಧರ್ಮಪತ್ನಿ – ಜೆ.ಹೆಚ್.ಪಟೇಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸ್ಥಳೀಯ ಸಿದ್ದವೀರಪ್ಪ ಬಡಾವಣೆ 7ನೇ ತಿರುವಿನಲ್ಲಿರುವ ಅವರ ಸ್ವಗೃಹದಲ್ಲಿ ಇಡಲಾಗಿದ್ದು, ನಾಳೆ ದಿನಾಂಕ 28ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
December 27, 2024