ಹರಿಹರ ತಾಲ್ಲೂಕು ಕೆ. ಬೇವಿನಹಳ್ಳಿ ಗ್ರಾಮದ, ಹಾಲಿ ದಾವಣಗೆರೆ ವಾಸಿ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ದಿ|| ಕೆ. ಕೊಟ್ರಪ್ಪ ಅವರ ಧರ್ಮಪತ್ನಿ ಶ್ರೀಮತಿ ಕೆ. ಕಮಲಮ್ಮ ಅವರು ದಿನಾಂಕ 13.09.2020ರ ಭಾನುವಾರ ಸಂಜೆ 5.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 82 ವರ್ಷ ವಯಸ್ಸಾಗಿತ್ತು. ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 14.09.2020ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಮೃತರ ಸ್ವಗ್ರಾಮ ಕೆ.ಬೇವಿನಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024