ದಾವಣಗೆರೆ ತಾಲ್ಲೂಕು ಬಿ. ಕಲ್ಪನಹಳ್ಳಿ ಗ್ರಾಮದ ವಾಸಿ ದೊಡ್ಡಗೌಡ್ರು ಕೆ.ಜಿ. ಬಸವನಗೌಡ್ರು ಇವರ ಪುತ್ರರೂ, ಬಿ. ಚಿತ್ತಾನಹಳ್ಳಿಯ ಶ್ರೀ ಬಸವೇಶ್ವರ ರೈಸ್ ಇಂಡಸ್ಟ್ರೀಸ್ ಮಾಲೀಕರೂ ಆದ ಶ್ರೀ ದೊಡ್ಡಗೌಡ್ರು ಕೆ.ಜಿ. ಪರಮೇಶ್ವರಗೌಡ್ರು ಅವರು, ದಿನಾಂಕ 03.09.2020ರ ಗುರುವಾರ ಸಂಜೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 76 ವರ್ಷ ವಯಸ್ಸಾಗಿತ್ತು. ಕೆ.ಜಿ. ಪರಮೇಶ್ವರಗೌಡ್ರು ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ದಿನಾಂಕ 03.09.2020ರ ಗುರುವಾರ ರಾತ್ರಿ ಬಿ.ಚಿತ್ತಾನಹಳ್ಳಿಯ ಮೃತರ ಜಮೀನಿನಲ್ಲಿರುವ ಶ್ರೀ ಬಸವೇಶ್ವರ ರೈಸ್ ಮಿಲ್ ಆವರಣದಲ್ಲಿ ನೆರವೇರಿಸಲಾಯಿತು.
December 25, 2024