ದಾವಣಗೆರೆ ಸಿದ್ದವೀರಪ್ಪ ಬಡಾವಣೆ 11ನೇ ಕ್ರಾಸ್ # 1898/6ರ ವಾಸಿ ದಿ|| ಬಿ.ಎಂ. ದೊಡ್ಡಣ್ಣ ಅವರ ಪುತ್ರ, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಬಿ.ಡಿ. ತಿಪ್ಪೇಸ್ವಾಮಿ ಅವರು ದಿನಾಂಕ 02.09.2020ರ ಬುಧವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 04.09.2020ರ ಶುಕ್ರವಾರ ಮಧ್ಯಾಹ್ನ ದಾವಣಗೆರೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024