ದಾವಣಗೆರೆ ಸಿಟಿ ಹಳೇಕುಂದುವಾಡದ ವಾಸಿ ಪಾಟೀಲ ಸಿದ್ದನಗೌಡ್ರು ಇವರ ಎರಡನೇ ಧರ್ಮಪತ್ನಿ ಶ್ರೀಮತಿ ದ್ರಾಕ್ಷಾಯಣಮ್ಮ ಅವರು ದಿನಾಂಕ 29.8.2020ನೇ ಶನಿವಾರ ಸಂಜೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 69 ವರ್ಷ ವಯಸ್ಸಾಗಿತ್ತು. ಪತಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 30.8.2020ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ವೈಕುಂಠಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 9, 2025