ಹರಿಹರ ತಾಲ್ಲೂಕು ಕೆ.ಬೇವಿನಹಳ್ಳಿ ಗ್ರಾಮದ ವಾಸಿ, ಗುತ್ತಿಗೆದಾರ ಬಿ.ಕೆ. ಚಂದ್ರಶೇಖರ್ ಇವರ ತಾಯಿ ಶ್ರೀಮತಿ ಪಾರವ್ವರ ವೀರಮ್ಮ (ದಿ. ಬಿ.ಕೆ. ಶಿವರುದ್ರಪ್ಪ ಇವರ ಧರ್ಮಪತ್ನಿ) ದಿನಾಂಕ 24.08.2020 ರ ಸೋಮವಾರ ಸಂಜೆ 4.30 ಕ್ಕೆ ದೈವಾಧೀನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.08.2020 ರ ಮಂಗಳವಾರ ಮಧ್ಯಾಹ್ನ 12.30 ಕ್ಕೆ ಕೆ.ಬೇವಿನಹಳ್ಳಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024