ದಾವಣಗೆರೆ ಸಿಟಿ ಆನೆಕೊಂಡ ಗ್ರಾಮದ ವಾಸಿ, ಲಿಂ. ಶ್ರೀ ಗೌಡ್ರು ದಾನಪ್ಪ ಮತ್ತು ಲಿಂ. ಶ್ರೀಮತಿ ಈರಮ್ಮ ದಂಪತಿ ಪುತ್ರರೂ, ಗಣೇಶ ಶಾಮಿಯಾನ ಸಪ್ಲೈಯರ್ ಹಾಗೂ ರುಚಿ ಪೇಂಟ್ಸ್ ಮಾಲೀಕರೂ ಆದ ಶ್ರೀ ಜಿ.ಡಿ. ದೇವರಾಜ ಅವರು ದಿನಾಂಕ 20.08.2020ರ ಗುರುವಾರ ಸಂಜೆ 7 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 48 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಸಹೋದರರು – ಸಹೋದರಿಯರು, ಮಾವಂದಿರು, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 20.08.2020ರ ಗುರುವಾರ ರಾತ್ರಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024