ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್, ಆಶ್ರಯ ಆಸ್ಪತ್ರೆ ರಸ್ತೆ, `ಶ್ರೀ ಲಕ್ಷ್ಮಿಅಂಬಾ ಸದನ’ # 1965 ವಾಸಿ, ವಕೀಲರಾದ ದಿ|| ಶ್ರೀ ಕೆ. ಎ. ಜಾಧವ್ ಅವರ ಧರ್ಮಪತ್ನಿ ಶ್ರೀಮತಿ ವಿಜಯ ಕೆ. ಜಾಧವ್ ಅವರು ದಿನಾಂಕ 10.08.2020ರ ಸೋಮವಾರ ರಾತ್ರಿ 8 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರಾದ ವಿಶ್ವಜಿತ್ ಕೆ. ಜಾಧವ್ ಮತ್ತು ಶೈಲೇಂದ್ರ ಕೆ. ಜಾಧವ್, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 11.08.2020ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಪಿ.ಬಿ. ರಸ್ತೆಯ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024