ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು, ಹಾಲೇಕಲ್ ಗ್ರಾಮದ ವಾಸಿ ಆರ್.ಜಿ. ಕಲ್ಲಿಂಗಪ್ಪ (ನಿವೃತ್ತ ಶಿಕ್ಷಕರು) ಇವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ (83) ಅವರು ದಿನಾಂಕ 25.12.2020 ರ ಶುಕ್ರವಾರ ರಾತ್ರಿ 10.10ಕ್ಕೆ ನಿಧನರಾಗಿದ್ದಾರೆ. ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಜಗಳೂರು ತಾಲ್ಲೂಕು ಹಾಲೇಕಲ್ ಗ್ರಾಮದಲ್ಲಿ ದಿನಾಂಕ 26.12.2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025