ದಾವಣಗೆರೆ ತರಳಬಾಳು ಬಡಾವಣೆ ವಾಸಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲ್ಲೂಕು ಮಠದ ಸಿದ್ದಾಪುರ ಗ್ರಾಮದ (ಮಠದ ಸಿರಿಗೆರೆ ಪಕ್ಕ) ಶ್ರೀ ಎಸ್.ಸಿ. ಕಲಿವೀರಪ್ಪ ನಿವೃತ್ತ ಅಸಿಸ್ಟೆಂಟ್ ಕಮೀಷನರ್ (ವಾಣಿಜ್ಯ ತೆರಿಗೆ) ಅವರು ದಿನಾಂಕ 14.12.2020 ರ ಸೋಮವಾರ ರಾತ್ರಿ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 71 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 15.12.2020ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ಮೃತರ ಸ್ವಗ್ರಾಮ ಮಠದ ಸಿದ್ದಾಪುರದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 7, 2025