ದಾವಣಗೆರೆ ಸಿಟಿ ಶಾಮನೂರು ವಾಸಿ ಜಡಪ್ಳಯ್ಯನವರ ಮಠದ ದಿ. ಜೆ.ಎಂ. ಬಸಯ್ಯನವರ ಧರ್ಮಪತ್ನಿ ಹಾಗೂ ಹೋಟೆಲ್ ಮುರುಗೇಶ್ ಮತ್ತು ಸಹೋದರರ ತಾಯಿ ಶ್ರೀಮತಿ ಸುವರ್ಣಮ್ಮ (80) ಅವರು ದಿನಾಂಕ 4.12.2020ರ ಶುಕ್ರವಾರ ರಾತ್ರಿ 7.27ಕ್ಕೆ ನಿಧನರಾದರು. ಮೂವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 5.12.2020ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 22, 2025