ದಾವಣಗೆರೆ ತಾಲ್ಲೂಕು ಹಳೇಬಿಸಲೇರಿ ಗ್ರಾಮದ ವಾಸಿ, ಲಿಂ|| ಕುಂದೂರು ಮುರಿಗೆಪ್ಪ ಮತ್ತು ಲಿಂ|| ಶ್ರೀಮತಿ ಕುಂದೂರು ಗೌರಮ್ಮ ಇವರ ಪುತ್ರ, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿಗಳೂ, ನಾಗನೂರು ವಿಎಸ್ಎಸ್ಎನ್ ಮಾಜಿ ಅಧ್ಯಕ್ಷರೂ ಮತ್ತು ಮುದಹದಡಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರೂ, ಹಾಲಿ ಸದಸ್ಯರೂ ಆದ ಕುಂದೂರು ಶ್ರೀ ಬಿ. ಮಹೇಶ್ವರಪ್ಪ ಅವರು ದಿನಾಂಕ 21.11.2020ರ ಶನಿವಾರ ಸಂಜೆ 6.30 ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.11.2020ರ ಭಾನುವಾರ ಬೆಳಿಗ್ಗೆ 7.30 ಗಂಟೆಗೆ ಹಳೇಬಿಸಲೇರಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
February 27, 2025