ಉಚ್ಚಂಗಿದುರ್ಗದ ನಿವಾಸಿಗಳಾದ ಊರಿನ ಗೌಡರಾದ ಚನ್ನಬಸವನಗೌಡ, ನಾಗಮ್ಮ ದಂಪತಿಗಳ ಆದರ್ಶ ಮನೆತನದಲ್ಲಿ ಡಾ꠱ ಕೆ.ಸಿದ್ದೇಶ್ಗೌಡರು ದಿನಾಂಕ 01.07.1947 ರಲ್ಲಿ 5ನೇ ಮಗನಾಗಿ ಜನಿಸಿದರು. ನಂತರ ಪ್ರಾಥಮಿಕ, ಮಾಧ್ಯಮಿಕ , ಪ್ರೌಢಶಾಲೆ, ಪಿ.ಯು.ಸಿ. ವಿದ್ಯಾಭ್ಯಾಸವನ್ನು ಹರಪನಹಳ್ಳಿಯ ಸರ್ಕಾರಿ ಶಾಲೆಗಳಲ್ಲೇ ಓದಿ ಪಿ.ಯು.ಸಿ. ಯಲ್ಲಿ ಉತ್ತಮ ಅಂಕಗಳಸಿದ್ದರ ಫಲವಾಗಿ ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿ ಉತ್ತಮ ಸಾಧನೆ ಮಾಡಿ ಎಂ.ಬಿ.ಬಿ.ಎಸ್. ಪದವಿ ಪಡೆದರು. 1970 ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು ಅಲ್ಲಿಯೇ ಹೃದಯತಜ್ಞತೆಯ ಸರ್ಜರಿಯಲ್ಲಿ ಎಂ.ಡಿ., ಎಫ್.ಎ.ಸಿ.ಸಿ, ಮತ್ತು ಎಫ್.ಎ.ಹೆಚ್.ಎ. ಪದವಿಯನ್ನು ಪೂರ್ಣ ಗೊಳಿಸಿದರು. ನಂತರ ಅಮೆರಿಕಾದಲ್ಲಿಯೇ ಮಿಸೌರಿ ರಾಜ್ಯದ ಸೆಂಟ್ ಲೂಯಿಸ್ ಪಟ್ಟಣದ, ಸೆಂಟ್ಲೂಕ್ಸ್ ಆಸ್ಪತ್ರೆಯಲ್ಲಿ ತಮ್ಮ 50 ವರ್ಷದ ಸುದೀರ್ಘ ಸೇವೆಯನ್ನು ಸಲ್ಲಿಸಿದರು.ಡಾ|| ಕೆ ಸಿದ್ದೇಶ್ಗೌಡರು ಅಮೆರಿಕದಲ್ಲಿ ದುರಾದೃಷ್ಟವಶಾತ್ ದಿನಾಂಕ 13.11.2020 ರಂದು ಬೆಳಿಗ್ಗೆ 5:45ಕ್ಕೆ ಶಿವೈಕ್ಯರಾದರು. ಅವರ ಅಂತ್ಯಸಂಸ್ಕಾರವನ್ನು ವೀರಶೈವ ವಿಧಿ-ವಿಧಾನದಂತೆ ಸೆಂಟ್ ಲೂಯಿಸ್ ಪಟ್ಟಣದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 13, 2025