ಭಾರತ ಕಮ್ಯುನಿಸ್ಟ್ ಪಕ್ಷದ ಯುವ ಮುಖಂಡರೂ, ಸಿಪಿಐ ಜಿಲ್ಲಾ ಮಂಡಳಿ ಸದಸ್ಯರೂ ಆದ ಕಾಂ. ಸೈಯದ್ ಖಾಜಾಪೀರ್ (43) ಅವರು ನಗರದಲ್ಲಿ ನಿಧನರಾದರು. ಅನಾರೋಗ್ಯ ನಿಮಿತ್ತ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 4 ಗಂಟೆಗೆ ಸೈಯದ್ ಖಾಜಾಪೀರ್ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರಿಯರು, ಇಬ್ಬರು ಪುತ್ರರು, ಓರ್ವ ಸಹೋದರ, ಮೂವರು ಸಹೋದರಿಯರನ್ನು ಆಗಲಿದ್ದಾರೆ. ಮೃತ ಸೈಯದ್ ಖಾಜಾ ಪೀರ್ ಅವರ ಪಾರ್ಥಿವ ಶರೀರವನ್ನು ದಾವಣಗೆರೆಯ ಇಮಾಮ್ ನಗರದಲ್ಲಿರುವ ಅವರ ಮನೆಯಲ್ಲಿ ಸೋಮವಾರ ಅಂತಿಮ ನಮನಕ್ಕೆ ವ್ಯವಸ್ಥೆಗೊಳಿಸಿ ಮಧ್ಯಾಹ್ನ ನಗರದ ಖಬರಸ್ಥಾನದಲ್ಲಿ ಶವ ಸಂಸ್ಕಾರ ನೆರವೇರಿಸಲಾಗುವುದು ಎಂದು ಅವರ ಸಹೋದರ ದಾದಾಪೀರ್ ತಿಳಿಸಿದ್ದಾರೆ.
February 24, 2025