ದಾವಣಗೆರೆ ಸಿಟಿ ರಾಜೀವ್ ಗಾಂಧಿ ಬಡಾವಣೆ ವಾಸಿ, ಸವಿತಾ ಸಮಾಜದ ಹಿರಿಯರಾದ ಕೊಲ್ಪುರ್ ಹನುಮಂತಪ್ಪ (80) ಅವರು ದಿನಾಂಕ 27.7.2020ರ ಸೋಮವಾರ ಮಧ್ಯಾಹ್ನ 2.15 ಗಂಟೆಗೆ ನಿಧನರಾದರು. ಪತ್ನಿ, ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 28.7.2020ರ ಮಂಗಳವಾರ ಬೆಳಿಗ್ಗೆ 11.30 ಕ್ಕೆ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 3, 2024