ದಾವಣಗೆರೆ ತರಳಬಾಳು ಬಡಾವಣೆ, ವಿದ್ಯಾನಗರ ಕೊನೆ ಬಸ್ಸ್ಟಾಪ್ (# 2008/91), 19ನೇ ಕ್ರಾಸ್ ವಾಸಿ, ಬಿಎಸ್ಸೆನ್ನೆಲ್ ನಿವೃತ್ತ ಎ.ಓ. ಶ್ರೀ ಪಿ.ಹೆಚ್. ಕುಲಕರ್ಣಿ ಅವರು ದಿನಾಂಕ 28.10.2020ರ ಬುಧವಾರ ಬೆಳಿಗ್ಗೆ 5.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.10.2020ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 9, 2025