ದಾವಣಗೆರೆ ಪಿ.ಬಿ. ರಸ್ತೆ, ದರ್ಶನ್ ಕಾಂಪ್ಲೆಕ್ಸ್ ಹಿಂಭಾಗದ # 818/9ರ ವಾಸಿ, ದಿ. ಶ್ರೀ ವಿಷ್ಣುರಾವ್ ಗುಜ್ಜರ್ ಅವರ ಧರ್ಮಪತ್ನಿ ಹಾಗೂ ಪಿ.ಬಿ. ರಸ್ತೆಯ ಮಾಲತೇಶ ಫರ್ನಿಷಿಂಗ್ ಮಾಲೀಕರಾದ ಶ್ರೀ ಜಿ.ವಿ. ಮಾಲತೇಶ್ ಅವರ ತಾಯಿ ಶ್ರೀಮತಿ ಸಕ್ಕೂಬಾಯಿ ಅವರು, ದಿನಾಂಕ 25.10.2020ರ ಭಾನುವಾರ ಸಂಜೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 86 ವರ್ಷ ವಯಸ್ಸಾಗಿತ್ತು. ಐವರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26.10.2020ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಪಿ.ಬಿ. ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
November 26, 2024