ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆ ಖಜಾಂಚಿಯಾಗಿದ್ದ ದಿ|| ಎ.ಸಿ. ಜಯಣ್ಣ ಅವರ ಪುತ್ರರೂ, ಶಿವ ಸಹಕಾರಿ ಬ್ಯಾಂಕ್ ಮಾಜಿ ನಿರ್ದೇಶಕರೂ, ಉದ್ಯಮಿಗಳೂ ಆದ ಶ್ರೀ ಎ.ಜೆ. ಸಂದೀಪ್ ಅವರು ದಿನಾಂಕ 22.10.2020ರ ಗುರುವಾರ ಸಂಜೆ 5.30ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 53 ವರ್ಷ ವಯಸ್ಸಾಗಿತ್ತು. ಮೃತರ ಪಾರ್ಥಿವ ಶರೀರವನ್ನು ದಾವಣಗೆರೆ ಪಿ.ಜೆ. ಬಡಾವಣೆ 8ನೇ ಮುಖ್ಯರಸ್ತೆ, 8ನೇ ತಿರುವಿನಲ್ಲಿ ಅವರ ಸ್ವಗೃಹದಲ್ಲಿ ದಿನಾಂಕ 23.10.2020ರ ಶುಕ್ರವಾರ ಮಧ್ಯಾಹ್ನ 12 ಗಂಟೆಯವರೆಗೆ ಇರಿಸಲಾಗುವುದು. ನಂತರ ಮಧ್ಯಾಹ್ನ 1 ಗಂಟೆಗೆ ದೊಡ್ಡಬಾತಿಯ ಬಳಿ ಇರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು.
January 9, 2025