ದಾವಣಗೆರೆ ತಾಲ್ಲೂಕು ಚಂದ್ರನಹಳ್ಳಿ ಗ್ರಾಮದ ದಿ|| ಕೊಂಡೇರ ತಿಮ್ಮಪ್ಪನವರ ಧರ್ಮಪತ್ನಿ 2014-15ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ಶ್ರೀಮತಿ ಕೊಂಡೇರ ಲಕ್ಕಮ್ಮ ಅವರು ದಿನಾಂಕ 15.07.2020ರ ಬುಧವಾರ ರಾತ್ರಿ 10.30 ಕ್ಕೆ ನಿಧನರಾದರು. 6 ಜನ ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 16.07.2020ರ ಗುರುವಾರ ಮಧ್ಯಾಹ್ನ 1.30ಕ್ಕೆ ಚಂದ್ರನಹಳ್ಳಿಯ ಮೃತರ ಸ್ವಂತ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024