ಅಪ್ಪಟ ಗಾಂಧಿವಾದಿ, ಅಪರೂಪದ ರಾಜಕಾರಣಿ, ಸಾವಿರಾರು ಕ್ರೀಡಾಪಟುಗಳ ಪ್ರೋತ್ಸಾಹಕ, ಕುರುಬ ಸಮಾಜದ ಮುಖಂಡ, ಹಿಂದುಳಿದ ವರ್ಗಗಳ ನಾಯಕ, ಹಿರಿಯ ಮುತ್ಸದ್ಧಿ ಕೆ.ಮಲ್ಲಪ್ಪ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಸ್ಥಳೀಯ ಆಂಜನೇಯ ಬಡಾವಣೆ ಯಲ್ಲಿರುವ ಅವರ ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ ಸುಮಾರು 92 ವರ್ಷ ವಯಸ್ಸಾಗಿತ್ತು. ವಯೋ ಸಹಜತೆಯಿಂದ ಬಳಲುತ್ತಿದ್ದ ಅವರು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇಂದು ಸಂಜೆ ನಗರದ ರುದ್ರ ಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025