ದಾವಣಗೆರೆ ವಿದ್ಯಾನಗರ ಶಿಕ್ಷಕರ ಬಡಾವಣೆ # 1645 /84ರ ವಾಸಿ ಹಾಗೂ ದಾವಣಗೆರೆ ಭದ್ರಾ ನಾಲಾ ಉಪ ವಿಭಾಗ ನಂ.1ರ ಸಹಾಯಕ ಇಂಜಿನಿಯರ್ ಶ್ರೀ ಜೆ.ಎಸ್. ತಿಮ್ಮರಾಜು ಅವರು ದಿನಾಂಕ 08.10.2020ರ ಗುರುವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 57 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 09.10.2020 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
July 23, 2024