ಮಲೇಬೆನ್ನೂರು ಪಟ್ಟಣದ ನೀಲ್ಕಮಲ್ ಚಿತ್ರಮಂದಿರದ ಮಾಲೀಕರಾಗಿದ್ದ ದಿ|| ಸೈಯದ್ ಖಾಸೀಂಸಾಬ್ ಅವರ ಹಿರಿಯ ಪುತ್ರರೂ, ಎಸ್.ಕೆ. ರೈಸ್ಮಿಲ್ ಮಾಲೀಕರೂ, ಹರಿಹರ ಎಪಿಎಂಸಿ ನಿರ್ದೇಶಕರೂ ಆದ ಜೆಡಿಎಸ್ ಮುಖಂಡ ಶ್ರೀ ಎಸ್.ಕೆ. ಅಲ್ತಾಫ್ (48 ವರ್ಷ) ಅವರು ದಿನಾಂಕ 07.10.2020ರ ಬುಧವಾರ ತಡರಾತ್ರಿ 1 ಗಂಟೆಗೆ ನಿಧನರಾದರು. ತಾಯಿ, ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ, ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 08.10.2020ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಮಲೇಬೆನ್ನೂರು ಪಟ್ಟಣದ ಖಬರಸ್ತಾನದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025