ಹರಪನಹಳ್ಳಿ ತಾಲ್ಲೂಕು ರಾಗಿಮಸಲವಾಡ ಗ್ರಾಮದ ವಾಸಿ ದಿ|| ಕೊಂಡಜ್ಜಿ ಹೆಚ್.ಪಿ. ವೀರಪ್ಪನವರ ಧರ್ಮಪತ್ನಿ ಹಾಗೂ ದಿ|| ಹೆಚ್ ಸಣ್ಣಮುನಿಯಪ್ಪನವರ ಪುತ್ರಿ ಶ್ರೀಮತಿ ಹೆಚ್.ಪಿ. ಉಮಾದೇವಿ (70) ಇವರು ದಿನಾಂಕ 11.09.2021ರ ಶನಿವಾರ ಮಧ್ಯಾಹ್ನ 2.15ಕ್ಕೆ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12.09.2021ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
February 24, 2025