ಹರಿಹರ ತಾಲ್ಲೂಕು ಕುಣಿಬೆಳಕೆರೆ ವಾಸಿ ದಿ|| ಮೂಲಿಮನಿ ಶಿವರುದ್ರಪ್ಪನವರ ಪುತ್ರ ಶ್ರೀ ಮೂಲಿಮನಿ ಚಂದ್ರಶೇಖರಪ್ಪ ಅವರು ದಿನಾಂಕ 11.9.2021ರ ಶನಿವಾರ ಸಂಜೆ 5 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 62 ವರ್ಷ ವಯಸ್ಸಾಗಿತ್ತು. ತಾಯಿ, ಪತ್ನಿ, ಸಹೋದರರು, ಮೂವರು ಪುತ್ರಿಯರು, ಓರ್ವ ಪುತ್ರ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.9.2021ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮ ಕುಣಿಬೆಳಕೆರೆಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 24, 2025