ದಾವಣಗೆರೆ ಎಸ್.ಪಿ.ಎಸ್ ನಗರ 2ನೇ ಹಂತದ ವಾಸಿ ಕೊಪ್ಪಳ ಜಿ. ಕುಷ್ಟಗಿ ತಾ. ತಳಿಗೇರಿ ಗ್ರಾಮದ ದಿ. ಲಿಂಗನಗೌಡ ಮುದೇಗೌಡ್ರ ಅವರ ಪತ್ನಿ ಶ್ರೀಮತಿ ಲಕ್ಷ್ಮಮ್ಮ ಮುದೇಗೌಡ್ರ (98) ಅವರು ದಿನಾಂಕ 05.9.2021ರ ಭಾನುವಾರ ಸಂಜೆ 6.10 ಕ್ಕೆ ನಿಧನರಾದರು. ನಾಲ್ವರು ಪುತ್ರರು, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 06.09.2021ರ ಸೋಮವಾರ ಬೆಳಗ್ಗೆ 11.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 24, 2025