ದಾವಣಗೆರೆ ಶಿವಕುಮಾರಸ್ವಾಮಿ ಬಡಾವಣೆಯ ವಾಸಿ ಲಿಂಗದಕಲ್ಗುಡಿ ದಿ|| ಪೈಲ್ವಾನ್ ಚನ್ನಬಸಪ್ಪ ಅವರ ಹಿರಿಯ ಪುತ್ರ ಮತ್ತು ಶ್ರೀ ಲಿಂಗೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಶ್ರೀ ಪೈಲ್ವಾನ್ ಎನ್.ಸಿ. ನಾಗಪ್ಪ ಅವರು ದಿನಾಂಕ 29.08.2021ರ ಭಾನುವಾರ ಮಧ್ಯಾಹ್ನ 1.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 81 ವರ್ಷ ವಯಸ್ಸಾಗಿತ್ತು. ನಾಗಪ್ಪ ಅವರು, ಬಿಜೆಪಿ ಯುವ ಮುಖಂಡರಾದ ಎನ್. ರಾಜಶೇಖರ್ ಅವರ ತಂದೆ. ಮೃತರು ಪತ್ನಿ, ಸಹೋದರ, ಸಹೋದರಿಯರು, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 30.08.2021ರ ಸೋಮವಾರ ಬೆಳಿಗ್ಗೆ 10.30 ಕ್ಕೆ ನಗರದ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
April 11, 2025