ದಾವಣಗೆರೆಯ ಹೆಸರಾಂತ ಕೈಗಾರಿಕೋದ್ಯಮಿಗಳೂ, ಬಸವ ತತ್ವ ಪರಿಪಾಲಕರೂ, ಬಸವ ಬಳಗದ ಗೌರವಾಧ್ಯಕ್ಷರೂ, ಬಸವ ಮಂಟಪದ ಟ್ರಸ್ಟಿಗಳೂ, ಅಶ್ವಿನಿ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷರೂ ಆದ ಶರಣ ಶ್ರೀ ಹೆಚ್. ಎಂ. ಸ್ವಾಮಿ ಅವರು ದಿನಾಂಕ 15.08.2021ರ ಭಾನುವಾರ ಅಪರಾಹ್ನ 3.30ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ದಿನಾಂಕ 16.08.2021ರ ಸೋಮವಾರ ಮಧ್ಯಾಹ್ನ 1 ಗಂಟೆಯವರೆಗೂ ಎಂ.ಸಿ.ಸಿ `ಎ’ ಬ್ಲಾಕ್ನ ಡಾ. ಎಂ.ಸಿ.ಮೋದಿ ರಸ್ತೆಯಲ್ಲಿರುವ ದಿವಂಗತರ ಸ್ವಗೃಹದಲ್ಲಿ ಇರಿಸಲಾಗಿದೆ. ನಂತರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಕೋಲ್ಡ್ ಸ್ಟೋರೆಜ್ನಲ್ಲಿ ಇಡಲಾಗುವುದು. ದಿನಾಂಕ 18.08.2021ರ ಬುಧವಾರದಂದು ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
November 26, 2024