ಹರಿಹರ ತಾಲ್ಲೂಕು ಮಲೇಬೆನ್ನೂರು ಗ್ರಾಮದ ವಾಸಿ, ದಿ|| ಗೌಡ್ರು ಹಾಲಪ್ಪ ಮತ್ತು ದಿ|| ಶ್ರೀಮತಿ ಸಾವಿತ್ರಮ್ಮ ದಂಪತಿ ಪುತ್ರರೂ ಹಾಗು ಗೌಡ್ರು ರಾಜಕುಮಾರ್ (ರಾಜಣ್ಣ) ಇವರ ಸಹೋದರರೂ, ದಾವಣಗೆರೆಯ ಜಜಮು ವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಪ್ರಾಧ್ಯಾಪಕರೂ ಆದ ಡಾ|| ಜಿ.ಹೆಚ್. ಮಂಜುನಾಥ್ ಅವರು ದಿನಾಂಕ 25.03.2021ರ ಗುರುವಾರ ಸಂಜೆ 6.10 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಮೃತರ ಪಾರ್ಥಿವ ಶರೀರವನ್ನು ಎಂ.ಸಿ. ಕಾಲೋನಿ `ಎ’ ಬ್ಲಾಕ್, ರೆಡ್ಡಿ ಬಿಲ್ಡಿಂಗ್ ಹತ್ತಿರ, ದಾವಣಗೆರೆ ಇಲ್ಲಿರುವ ಅವರ ಸ್ವಗೃಹದಲ್ಲಿ ದಿನಾಂಕ 26.03.2021ರ ಶುಕ್ರವಾರ ಮಧ್ಯಾಹ್ನ 12.30 ರವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ನಂತರ ಮಧ್ಯಾಹ್ನ 2 ಗಂಟೆಗೆ ಅವರ ಸ್ವಂತ ಊರಾದ ಮಲೇಬೆನ್ನೂರಿನ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 28, 2025