ದಾವಣಗೆರೆ ಸಿಟಿ ಲೆನಿನ್ ನಗರ ಎ ಬ್ಲಾಕ್, 3ನೇ ಮುಖ್ಯರಸ್ತೆ, 3ನೇ ಕ್ರಾಸ್ ಓಂಕಾರಪ್ಪ ಕೋಳಿ ಫಾರಂ ಹತ್ತಿರದ # 781/8ಬಿ ವಾಸಿ ಶ್ರೀ ಹೆಚ್.ಎನ್. ಕೊಲ್ಲಾರಯ್ಯ, ಉಪತಹಶೀಲ್ದಾರ್ ಇವರ ಧರ್ಮಪತ್ನಿ ಶ್ರೀಮತಿ ಹೆಚ್. ನಿಂಗಮ್ಮ (ಮೂಲತಃ ಚಳ್ಳಕೆರೆ ತಾ. ಹಿರೇಹಳ್ಳಿ ಗ್ರಾಮ, ಚಿತ್ರದುರ್ಗ ಜಿ.) ಇವರು ದಿನಾಂಕ 5.08.2021 ರ ಗುರುವಾರ ರಾತ್ರಿ 10.30 ಕ್ಕೆ ದಾವಣಗೆರೆಯಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 73 ವರ್ಷ ವಯಸ್ಸಾಗಿತ್ತು. ಪತಿ, ಓರ್ವ ಪುತ್ರ, ಆರು ಜನ ಪುತ್ರಿಯರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 06.08.2021ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕೆ.ಬಿ. ಬಡಾವಣೆಯಲ್ಲಿರುವ ಬೃಂದಾವನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 4, 2025